ಇರ್ಫಾನ್ ಖಾನ್ (ಇರ್ಫಾನ್ ಖಾನ್ ಸಾಹಬ್ಜಾದೆ ) (7 ಜನವರಿ 1967 - 29 ಏಪ್ರಿಲ್ 2020) ಒಬ್ಬ ಭಾರತೀಯ ನಟರಾಗಿದ್ದರು, ಹಿಂದಿ ಚಿತ್ರರಂಗದಲ್ಲಿ ಮುಖ್ಯವಾಗಿ ಕೆಲಸ ಮಾಡಿದ ಅವರು , ಬ್ರಿಟಿಷ್ ಮತ್ತು ಅಮೇರಿಕನ್ ಚಲನಚಿತ್ರಗಳಲ್ಲಿಯು ನಟಿಸಿದ್ದಾರೆ . ಭಾರತೀಯ ಸಿನೆಮಾದ ಅತ್ಯುತ್ತಮ ನಟರಲ್ಲಿ ಒಬ್ಬರೆಂದು ಮಾಧ್ಯಮಗಳಲ್ಲಿ ಉಲ್ಲೇಖಿಸಲಾಗಿದೆ, == ಇತಿವೃತ್ತ == ಖಾನ್ ಅವರ 30 ವರ್ಷಗಳ ವೃತ್ತಿಜೀವನದಲ್ಲಿ ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಏಷ್ಯನ್ ಚಲನಚಿತ್ರ ಪ್ರಶಸ್ತಿ ಮತ್ತು ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಸಂದಿವೆ. 2011 ರಲ್ಲಿ, ಅವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ನೀಡಿ ಗೌರವಿಸಲಾಯಿತು. ಸಲಾಮ್ ಬಾಂಬೆ ಚಿತ್ರದ ಪೋಷಕ ಪಾತ್ರದಲ್ಲಿ ಅಭಿನಯಿಸುವದರ ಜೊತೆಗೆ ಖಾನ್ ಚಿತ್ರರಂಗಕ್ಕೆ 1988 ರಲ್ಲಿ ಪಾದಾರ್ಪಣೆ ಮಾಡಿದರು. ಬ್ರಿಟಿಷ್ ಚಲನಚಿತ್ರ ದಿ ವಾರಿಯರ್ (2001) ನಲ್ಲಿ ನಟಿಸಿದ ನಂತರ ಅವರಿಗೆ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಬಂದವು. ನಂತರ ಹಸಿಲ್ (2003) ಮತ್ತು ಮಕ್ಬೂಲ್ (2004) ಅದ್ಭುತ ಅಭಿನಯದಿಂದ ನಂತರ ದಿ ನೇಮ್‌ಸೇಕ್ (2006), ಲೈಫ್ ಇನ್ ಎ ಮೇಟ್ರೋ (2007)ನಲ್ಲಿ ತಮ್ಮ ಪಾತ್ರಗಳಿಗೆ ವಿಮರ್ಶಕರ ಮೆಚ್ಚುಗೆ ಗಳಿಸಿದರು. ಪಾನ್ ಸಿಂಗ್ ತೋಮರ್ (2011). ದಿ ಲಂಚ್‌ಬಾಕ್ಸ್ (2013), ಪಿಕು (2015), ಮತ್ತು ತಲ್ವಾರ್ (2015) ಚಿತ್ರಗಳಲ್ಲಿ ಅವರು ನಟಿಸಿದ ಪಾತ್ರಗಳಿಗೆ ಹೆಚ್ಚಿನ ಯಶಸ್ಸು ಸಿಕ್ಕಿತು. ಹಾಲಿವುಡ್ ಚಲನಚಿತ್ರಗಳಾದ ದಿ ಅಮೇಜಿಂಗ್ ಸ್ಪೈಡರ್ ಮ್ಯಾನ್ (2012), ಲೈಫ್ ಆಫ್ ಪೈ (2012), ಜುರಾಸಿಕ್ ವರ್ಲ್ಡ್ (2015), ಮತ್ತು ಇನ್ಫರ್ನೊ (2016) ಗಳಲ್ಲಿ ಅಭಿನಯಿಸಿದ್ದಾರೆ. ಅವರು ಟೆಲಿವಿಶನ್, ಹಾಗೂ ರಂಗಭೂಮಿಯಲ್ಲೂ ಕೆಲಸ ಮಾಡಿದ್ದಾರೆ . == ಬಾಲ್ಯದ ದಿನಗಳು == ೧೯೯೫ ರ ಫೆಬ್ರವರಿ ೨೩ ರಂದು, ಮುಸಲ್ಮಾನ ಪರಿವಾರವೊಂದರಲ್ಲಿ ಜನಿಸಿದರು. ತಾಯಿ,ಬೇಗಂ, 'ಟೊಂಕ್ ಹಕೀಮ್' ಪರಿವಾರದಿಂದ ಬಂದವರು. ತಂದೆ, ಒಬ್ಬ ಜಾಗೀರ್ದಾರ್. 'ಟೊಂಕ್' ಜಿಲ್ಲೆಯ 'ಖಜೂರಿ' ಗ್ರಾಮದಲ್ಲಿ 'ಟೈರ್ ಬಿಸಿನೆಸ್' ನಡೆಸುತ್ತಿದ್ದರು. ಖಾನ್ ಜೈಪುರದಲ್ಲಿ ಎಂ.ಎ. ಓದಿನ ನಂತರ , 1984 ರಲ್ಲಿ ನವದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್‌ಎಸ್‌ಡಿ) ದಲ್ಲಿ ನಟನೆಯ ತರಬೇತಿ ಪಡೆದಿದ್ದಾರೆ. == ವೈಯಕ್ತಿಕ ಜೀವನ == ಕವಯಿತ್ರಿ, 'ಸುತಾಪ ಸಿಕ್ದಾರ್' ಜೊತೆ ಮದುವೆಯಾದರು. ಆಕೆ,'ಎನ್.ಎಸ್.ಡಿ'.ಪದವೀಧರೆ. ಮಕ್ಕಳು 'ಬಾಬಿಲ್', ಮತ್ತು 'ಆರ್ಯನ್', ಇಬ್ಬರು ಸೊದರರು. == ಅಭಿನಯ ಪ್ರಪಂಚದಲ್ಲಿ == == ಚಲನಚಿತ್ರಗಳು == == ಪ್ರಶಸ್ತಿ/ಪುರಸ್ಕಾರಗಳು == ೩ ಫಿಲ್ಮ್ ಫೇರ್ ಅವಾರ್ಡ್ಸ್, ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಅವಾರ್ಡ್, ಸ್ಪಿರಿಟ್ ಅವಾರ್ಡ್ ಗೆ, ನಾಮಿನೇಶನ್. ೨೦೧೧ ರ, ಪದ್ಮಶ್ರೀ ಪ್ರಶಸ್ತಿ, ನ್ಯಾಶನಲ್ ಫಿಲ್ಮ್ ಅವಾರ್ಡ್, ಬೆಸ್ಟ್ ಆಕ್ಟರ್, ೬೦ ನೆಯ ನ್ಯಾಷನಲ್ ಪ್ರಶಸ್ತಿಗಳು ೨೦೧೨ ರ, ಪಾನ್ ಸಿಂಗ್ ತೋಮರ್ ೨೦೧೨ ರ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ', ಹಾಲೀವುಡ್ ಚಲನಚಿತ್ರ,'ಲೈಫ್ ಆಫ್ ಪೈ == ಉಲ್ಲೇಖಗಳು ==